ಕಥೆ
ಸೆತ್ಸುಬುನ್ ಎಂದರೆ ಋತುಗಳ ನಡುವಿನ ಗೆರೆ; ಅವುಗಳಲ್ಲಿ ಚಳಿಗಾಲ ವಸಂತವಾಗುವ ಈ ಗೆರೆಯೇ ಮುಖ್ಯವಾದದ್ದು — ಹಳೆಯ ವರ್ಷ ಮುಗಿಯುವ ಕ್ಷಣ. ಆ ತಿರುವಿನಲ್ಲೇ ರಾಕ್ಷಸರು ನುಸುಳುತ್ತಾರೆಂಬ ನಂಬಿಕೆ.
ಆದ್ದರಿಂದ ಅವರನ್ನು ಹೊರಗೆ ಎಸೆಯುತ್ತಾರೆ. ಬಾಗಿಲಿಗೂ ಕಿಟಕಿಯಿಂದ ಹೊರಕ್ಕೂ ಹುರಿದ ಸೋಯಾ ಅವರೆ ಎಸೆಯುತ್ತಾ ಒನಿ ವಾ ಸೊತೊ, ಫುಕು ವಾ ಉಚಿ ಎನ್ನುತ್ತಾರೆ — ರಾಕ್ಷಸರು ಹೊರಗೆ, ಅದೃಷ್ಟ ಒಳಗೆ.
